top of page

ನಮ್ಮ ಹೆಮ್ಮೆಯ ಕನ್ನಡಿಗರು

Celebrating local achievers whose dedication and accomplishments inspire our community and embody the vibrant spirit of Orpington Kannada Parivaara

ಡಾ. ಶ್ವೇತಾ ಹಿರೇಮಠ

ಯುಕೆ ಕನ್ನಡಿಗರಲ್ಲಿ ಗಾಯಕ ಗಾಯಕಿಯರ ಪ್ರತಿಭೆಗೇನೂ ಕಮ್ಮಿಯಿಲ್ಲ. ನಮ್ಮ ಹೆಮ್ಮೆಯ ಯುಕೆ ಕನ್ನಡತಿ ಡಾ. ಶ್ವೇತಾ ಹಿರೇಮಠ್ ಅವರು. ಮೂಲತಃ ಧಾರವಾಡದ ಇವರು ಲಂಡನ್ ನಲ್ಲಿ ವೈದ್ಯಕೀಯ ವೃತ್ತಿಯ ಜೊತೆಯಲ್ಲಿ ತಮ್ಮ ಸಂಗೀತ ಪಯಣವನ್ನು ಸಹ ಮುಂದುವರೆಸಿದ್ದಾರೆ. ವೃತ್ತಿಯಲ್ಲಿ ವೈದ್ಯೆ ಆದರೆ ಇಲ್ಲಿಯ ಕನ್ನಡ ಸಮೂದಾಯದಲ್ಲಿ ಒಬ್ಬ ಉತ್ತಮ ಗಾಯಕಿ ಎಂದು ತಮ್ಮ ಗುರುತನ್ನು ಗಟ್ಟಿಯಾಗಿಸಿಕೊಂಡಿರುವ ಡಾ. ಶ್ವೇತಾ ಅವರು ಜೀ ಕನ್ನಡ ಸರಿಗಮ ಮೊದಲ ಸೀಸನ್‌ನ ಅಂತಿಮ ಹಂತದಲ್ಲಿ ಸ್ಪರ್ಧಿಯಾಗಿದ್ದವರು. ಪಂಡಿತ್ ಚಂದ್ರ  ಶೇಖರ್  ಪುರಾಣಿಕ್ಮಠ  ಅವರ  ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. ಎಸ್. ಜಾನಕಿ, ವಾಣಿ ಜಯರಾಮ್, ಪುನೀತ್ ರಾಜಕುಮಾರ್, ಗುರು ಕಿರಣ್, ಮನೋಮೂರ್ತಿ, ರತ್ನಮಾಲಾ ಪ್ರಕಾಶ್, ಸಿ ಅಶ್ವಥ್, ರಾಜು ಅನಂತಸ್ವಾಮಿ, ಹೀಗೆ ಹಲವಾರು ಸಂಗೀತ  ದಿಗ್ಗಜರ ಸಮ್ಮುಖದಲ್ಲಿ ಹಾಡಿದ್ದಾರೆ. ಲಂಡನ್ ಹಾಗೂ ಯುಕೆ ಯ ಎಲ್ಲೆಡೆ ಹಲವಾರು ಗಾನಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಡಾ ಶ್ವೇತಾ ಅವರು ವಿಶ್ವ ಸಂಗೀತ ದಿನ 2022 ರ ಸಂದರ್ಭದಲ್ಲಿ "ಓ ಪ್ರೀತಿಯೇ" ಎಂಬ  ಕನ್ನಡ ಅಧಿಕೃತ ಸಂಗೀತ ವೀಡಿಯೊವನ್ನು ಶೀಘ್ರದಲ್ಲೇ ತಮ್ಮ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಇತ್ತೀಚೆಗೆ ಅವರು ತಮ್ಮ ವಿಡಿಯೋ ಬಗ್ಗೆ  ಪೋಸ್ಟರ್ ಮತ್ತು ಟೀಸರ್ ರಿಲೀಸ್ ಮಾಡಿದ್ದು, ಅದಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಈ ಒಂದು ಅವರ ವಿಡಿಯೋ ಸಂಗೀತಕ್ಕೆ ಸಂಗೀತ ಮತ್ತು ಸಾಹಿತ್ಯವನ್ನು ಪ್ರಸನ್ನ ಭೋಜಶೆಟ್ಟರ್ ಅವರು ನೀಡಿದ್ದಾರೆ. ಹಾಡು ಸುಂದರವಾಗಿ ಮೂಡಿ ಬಂದಿದೆ. ಲಂಡನ್‌ನ ಸುಂದರ ಹೊರವಲಯಗಳಲ್ಲಿ ಹಾಗೆಯೆ ಬೊಟನಿ ಬೇ ಬೀಚ್‌ನ ಸುಂದರವಾದ ಭೂದೃಶ್ಯಗಳನ್ನು ಒಳಗೊಂಡಿರುವ ವೀಡಿಯೊವನ್ನು ಹೆಚ್ಚಿನದಾಗಿ ಮಧ್ಯ ಲಂಡನ್‌ನಲ್ಲಿ ಚಿತ್ರೀಕರಿಸಲಾಗಿದೆ.  ಸಿನಿಮಾ ವೀಡಿಯೋಗ್ರಫಿಯನ್ನು ಸಾಮ ರಾಗ ಸ್ಟುಡಿಯೋದಿಂದ ಮಾಡಲಾಗಿದೆ. ಒಂದೇ ಟೇಕ್‌ನಲ್ಲಿ ಪೂರ್ಣ ಹಾಡಿನೊಂದಿಗೆ ಲಂಡನ್‌ನಲ್ಲಿ ಈ ಒಂದು ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ ಮತ್ತು ವಿಡಿಯೋ ಮತ್ತು ಸಂಗೀತ ಮಿಶ್ರಣವನ್ನು ಭಾರತದಲ್ಲಿ ಮಾಡಲಾಗಿದೆ. ಶ್ವೇತಾ ಹಿರೇಮಠ್ ಅವರ ಈ ಒಂದು ಕನ್ನಡ ಅಧಿಕೃತ ಸಂಗೀತ ವೀಡಿಯೋ ಜುಲೈ 1, 2022 ರಂದು ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಅವರ ಈ ಒಂದು ಅದ್ಭುತ ಪ್ರಯತ್ನಕ್ಕೆ ನಮ್ಮೆಲ್ಲರ ಶುಭಹಾರೈಕೆ ಇರಲಿ. ಅವರ ಈ ಯೂಟ್ಯೂಬ್ ವಿಡಿಯೋ  ಇಷ್ಟಪಡಲು, ಕಾಮೆಂಟ್ ಮಾಡಲು, ಹಂಚಿಕೊಳ್ಳಲು ಮತ್ತು ಅವರ ಯೌಟ್ಯೂಬ್ ಚಾನೆಲ್ ಗೆ ಚಂದಾದಾರರಾಗಲು ಮರೆಯಬೇಡಿ. ಡಾ. ಶ್ವೇತಾ ಹಿರೇಮಠ್ (shweta music🎶) ಯೌಟ್ಯೂಬ್ ಚಾನೆಲ್ ನಲ್ಲಿ ಅವರ ಹಾಡುಗಳನ್ನು  ಕೇಳಿ ಆನಂದಿಸಿ.

  • Facebook
  • YouTube
  • Dribbble

Local Talents

This is your Team section. Briefly introduce the team then add their bios below. Click here to edit.

Local Business

bottom of page