top of page

ಪುಟಾಣಿ ಪ್ರಪಂಚ

Our Story

೧೦ ಸೆಪ್ಟೆಂಬರ್ ೨೦೧೬, ಆರಪಿಂಗ್ಟನ್ ನ ಬಾಡ್ಜೆರ್ಸ್ ಮೌಂಟ್ ಮೆಮೋರಿಯಲ್ ಹಾಲ್ ನಲ್ಲಿ , ಸ್ಥಳೀಯ ಕನ್ನಡ ಪ್ರೇಮಿ ಗೆಳೆಯರು ಸೇರಿ , ನಮ್ಮ ಮಕ್ಕಳಿಗೆ ಕನ್ನಡ ಭಾಷೆ , ಸಂಸ್ಕೃತಿಯನ್ನು ಆಟ ಹಾಗೂ  ಪಾಠದ ಮೂಲಕ ಹೇಳಿಕೊಡುವ ಉದ್ದೇಶದಿಂದ ಹುಟ್ಟು ಹಾಕಿದ ಕನ್ನಡ ಶಾಲೆಯೇ "ಪುಟಾಣಿ ಪ್ರಪಂಚ". ವಿಶ್ವನಾಥ್ ಹಾಗೂ  ಚೈತ್ರ  ರವರ ಜೊತೆ ಸ್ಥಳೀಯರಾದ ಬದರಿನಾಥ, ವಿವೇಕ್ ಕೊಡಪ್ಪ, ಪ್ರಭು ಸಿದ್ದಯ್ಯ , ಜಯಸಿಂಹ , ಶಿವಕುಮಾರ್, ಅನಿಲ್  ಹಾಗೂ  ಶ್ರೀನಿವಾಸ್ ರವರು ಕೈ ಜೋಡಿಸಿ ಸುಮಾರು ೧೫ ರಿಂದ ೧೮ ಮಕ್ಕಳಿಗೆ ಪ್ರತೀ ವಾರ ಈ ಶಾಲೆಯಲ್ಲಿ ಕನ್ನಡ ಕಲಿಕೆಗೆ ಅವಕಾಶ ಒದಗಿಸಿಕೊಟ್ಟಿರುತ್ತಾರೆ .  ಕಳೆದ ಎಂಟು ವರುಷಗಳಲ್ಲಿ 4೦ ಕ್ಕೂ ಹೆಚ್ಚು ಮಕ್ಕಳಿಗೆ ಕನ್ನಡ ಹೇಳಿಕೊಡುತ್ತಿರುವ ಹೆಗ್ಗಳಿಕೆ  ಈ ಶಾಲೆಯದ್ದು. 

 

ಈ ಶಾಲೆ ಪ್ರಾರಂಭವಾದಾಗಿನಿಂದ ಅನೇಕ ಶಿಕ್ಷಕರು (ಚೈತ್ರ , ರಮ್ಯಾ ಭಾದ್ರಿ , ಸುಷ್ಮಾ , ಉಮಾ , ರವಿ , ಕಸ್ತೂರಿ , ಲಾಸ್ಯ ಹಾಗೂ ಶ್ರೀನಿವಾಸ್)   ತಮ್ಮ ಸಮಯವನ್ನು ಕನ್ನಡ ಕಲಿಸುವ ಸೇವೆಗೆ ವಿನಿಯೋಗಿಸಿದ್ದಾರೆ. ಮಕ್ಕಳನ್ನು ನಾಟಕ , ಹಾಡು , ಕ್ರೀಡೆ ಮೊದಲ್ಲಾದ ಚಟುವಟಿಕೆಗಳಲ್ಲಿ ತೊಡಗಿಸಿ ಕನ್ನಡ ಹೇಳಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. 

 

ಕನ್ನಡ ತರಗತಿಗಳು ಪ್ರತೀ ಭಾನುವಾರ ಸಂಜೆ 6.೦೦ ರಿಂದ 7. ೦೦ ರ ವರೆಗೆ  ಆರಪಿಂಗ್ಟನ್ ನ ಸೇಂಟ್  ನಿಕೋಲಸ್ ಚರ್ಚ್ ನಲ್ಲಿ ನಡೆಯುತ್ತವೆ. ಮಕ್ಕಳನ್ನು ಅವರ ವಯಸ್ಸಿನ ಮೇಲೆ ಗುಂಪು ಮಾಡಿ ಕನ್ನಡ ವನ್ನು ಹೇಳಿಕೊಡಲಾಗುತ್ತದೆ. ಸದ್ಯದ  ದಿನಗಳಲ್ಲಿ ಕಸ್ತೂರಿ , ಲಾಸ್ಯ ಹಾಗೂ ಶ್ರೀನಿವಾಸ್ ರವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿಮ್ಮ ಮಕ್ಕಳಿಗೂ ಕನ್ನಡ ಕಲಿಸುವ ಆಸಕ್ತಿ ಇದ್ದಲ್ಲಿ ಶಿಕ್ಷರನ್ನು ಸಂಪರ್ಕಿಸ ಬೇಕಾಗಿ ವಿನಂತಿ. 

Meet The Team

bottom of page